ಧಾರ್ಮಿಕ ಚಿಂತಕ ದಯಾನಂದ ರಾವ್ ಕಾವೂರು | Global TV

Posted on: March 20, 2024

ಸಾರ್ವಜನಿಕರಿಂದ ಗೌರವ ಪಡೆದು ಸಮಾಜದಲ್ಲಿ ತಲೆಯೆತ್ತಿ ನಡೆಯಬಲ್ಲ ಗಣ್ಯವ್ಯಕ್ತಿಗಳು ಯಾರು.?!!.

1)ಅಧರ್ಮದಿಂದ ನಡೆಯದಿರುವ ಬ್ರಾಹ್ಮಣನೇ.?!
2)ಅನ್ಯಾಯವನ್ನು ಮಾಡದೆ ರಾಜ್ಯವಾಳುವ ಅರಸನೇ.?!
3)ವಂಚನೆಯಿಲ್ಲದ ವ್ಯವಹಾರ ಮಾಡುವ ವೈಶ್ಯನೇ.?!
4)ಸಮಾಜ ಸೇವೆಯೇ ಜೀವನ ಎನ್ನುವ ಶೂದ್ರನೇ.?!
*ಒಬ್ಬ ಗಣ್ಯ ವ್ಯಕ್ತಿಯನ್ನು ಅಳೆಯುವುದು ಹೇಗೆ.?!
ಅವನ ಜ್ಞಾನದಿಂದಲೇ / ಸ್ಥಾನ ಮಾನ ದಿಂದಲೇ / ವ್ಯವಹಾರದ ಹಣದಿಂದಲೇ / ಸೇವಾ ಭಾವನೆಯ ಗುಣ ದಿಂದಲೇ.?!. 🌹
ಆದರೆ ನಾವೀಗ ನಮ್ಮ ಸಮಾಜದಲ್ಲಿ ಯಾರನ್ನು ಹೆಚ್ಚು ಗೌರವಿಸುತ್ತಿದ್ದೇವೆ.?! ಅವರಿಗೆ ಮೇಲಿಂದ ಮೇಲೆ ಸನ್ಮಾನ ಮಾಡಿ ಅವರ ಪ್ರಚಾರ ಯಾಕೆ ಮಾಡುತ್ತಿದ್ದೇವೆ.?! ನಿಜವಾದ ಸಮಾಜ ಸೇವಕರನ್ನು ಯಾಕೆ ಗಣ್ಯ ವ್ಯಕ್ತಿ ಎಂದು ಎಂದು ಪರಿಗಣಿಸುವುದಿಲ್ಲ.?!
ಯಾಕೆಂದರೆ ನಮ್ಮ ಕಾರ್ಯಕ್ರಮಗಳೂ ಪ್ರಚಾರಕ್ಕಾಗಿ + ಹಣಕ್ಕಾಗಿ ಅಲ್ಲವೇ, ಗುಣ ನಡತೆಗೆ ಬೆಲೆ ಯಾಕೆ ಕಡಿಮೆ.?!
ಹಿಂದುಳಿದ ವರ್ಗ, ಗಿರಿ/ ಹರಿ ಜನರ ಸೇವಾ ಕಾರ್ಯಗಳು ನಮಗೆ ಯಾಕೆ ಕಾಣಿಸುತ್ತಿಲ್ಲ.? ಕಸ ಗುಡಿಸಲು ಅವರೇ ಬೇಕು, ವಿಸರ್ಜನೆಯ ಮಲ ತೆಗೆಯಲು ಅವರೇ ಬೇಕು, ಕೃಷಿಗೆ ಕೈ ಕಾಲು ಕೆಸರು ಮಾಡಿಕೊಳ್ಳಲು ಅವರೇ ಬೇಕು ಅಲ್ಲವೇ.?! ಆದರೆ ಗಣ್ಯವ್ಯಕ್ತಿಯಂತೆ ಸನ್ಮಾನ ಪಡೆಯಲು ಅವರು ಬೇಡ ಅಲ್ಲವೇ.?!!.🌹
ಚಿಂತನೆಯ ವಿಶಾರ…👏

ಧರ್ಮಗಳ ಆಧಾರದಲ್ಲಿ ಭಗವಂತ/ ಪರಮಾತ್ಮ ಎಂಬ ಘನ ಮಹಾ ಶಕ್ತಿಯು ಬದಲಾಗುವುದೇ.?! ಹೌದು ಎನ್ನುವವರಿಗೆ ಬ್ರಹ್ಮ ಜ್ಞಾನ ಇದೆಯೇ.?!.

ಇದೊಂದು ಸದ್ಯ ನಮ್ಮ ಸಮಾಜದಲ್ಲಿ ಇರುವ ಅತೀ ದೊಡ್ಡ ಗೊಂದಲ / ಭಿನ್ನಾಭಿಪ್ರಾಯ / ಸಮಸ್ಯೆ ಎಂದರೂ ತಪ್ಪಾಗಲಾರದು… ಗ್ರಾಮ ವಲಯದ ಕಡಿಮೆ ವಿದ್ಯಾವಂತರಿಗಿಂತಲೂ ಹೆಚ್ಚು ಪಟ್ಟಣದ ಅಧಿಕ ವಿದ್ಯಾವಂತರಲ್ಲಿ ಈ ಭಿನ್ನಾಭಿಪ್ರಾಯಗಳು ಇವೆ.!! ಒಂದೇ ಸೂರ್ಯ, ಚಂದ್ರ, ಭೂಮಿ, ಸಾಗರ, ಗಾಳಿ, ಬೆಂಕಿ, ಗಿಡಮರಗಳ ಪ್ರಕೃತಿ ನಮ್ಮ ಸುತ್ತ ಮುತ್ತ ಇದ್ದ ಮೇಲೂ, ಕಾಣದ ದೇವರ ನಿರ್ಧಾರದಲ್ಲಿ ಧರ್ಮಾಧಾರಿತ ಬೇರೆ ಬೇರೆ ದೇವರು ಎನ್ನುವ ನಮ್ಮ ಬುದ್ಧಿಗೆ ಏನಾಗಿದೆ.?! ಪರ ಬ್ರಹ್ಮ, ಯೇಸು ಪಿತ, ಅಲ್ಲಾಹ್, ಭಗವಂತ, ಪರಮಾತ್ಮ, ಎಂದು ಕರೆಯಲ್ಪಡುವ ದೇವರು ಹಲವಾರು ಇರಲು ಸಾಧ್ಯವೇ.?!.🌹
ಹಾಗಾದರೆ ನಮ್ಮಲ್ಲಿರುವ ವಿದ್ಯೆ, ಜ್ಞಾನ, ಸಾಮಾಜಿಕ ಅನುಭವ, ಇವುಗಳಿಗೆ ಒಂದು ಅರ್ಥವಿದೆಯೇ.?!.
ಒಬ್ಬ ಹಿಂದು “ಅಲ್ಲಾಹೋ ಅಕ್ಬರ್” ಹೇಳಿದರೆ ತಪ್ಪೇ, ಹಾಗೇ ಒಬ್ಬ ಕ್ರೈಸ್ತ ” ಜೈ ಶ್ರೀ ರಾಮ್”, ಒಬ್ಬ ಮುಸಲ್ಮಾನ “ಜೈ ಶ್ರೀ ಕೃಷ್ಣ” ಹೇಳಿದರೆ, ದೇವರು ಕೇವಲ ಹೆಸರಿನಿಂದ ಬದಲಾಗುವರೇ.?!. ಒಂದು ಧರ್ಮದವರು ಇನ್ನೊಂದು ಧರ್ಮ ಸರಿಯಿಲ್ಲ ಎಂದು ನಿಂದನೆ ಮಾಡುವ ವಿಚಾರ ಸರಿಯೇ.?!.🌹
ಇದೇ ರೀತಿ ಮುಂದುವರಿದರೆ ನಾವೆಲ್ಲ ಮೂರ್ಖರು ಎಂದು ಬೇರೆ ಅಗತ್ಯವಿದೆಯೇ.?!. ನಿಮ್ಮ ಅಭಿಪ್ರಾಯ ತಿಳಿಸಿ…👏 +91 95904 24253


ಪ್ರತ್ಯಕ್ಷ ಕಾಣುವ ಪ್ರಕೃತಿ ಮಾತೆಯನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾದರೆ, ಪರಮಾತ್ಮ ಯಾರೆಂದು ತಿಳಿಯಲು ಸಾಧ್ಯವೇ.?!!..


ನಮ್ಮೆದುರು ಕಾಣುವ ಪ್ರಕೃತಿ ಮಾತೆಯನ್ನು ಪರಮಾತ್ಮದ ಇನ್ನೊಂದು ಮುಖ ಎಂದು ಎಣಿಸ ಬಹುದು, ಎಂದು ನನ್ನ ಭಾವನೆ.. ಯಾಕೆಂದರೆ ನಿರಾಕಾರ, ನಿರ್ಗುಣ, ಅವ್ಯಕ್ತ, ಪರಬ್ರಹ್ಮದ ದೇಹವೇ ಬ್ರಹ್ಮಾಂಡ ವಾದರೆ, ಪ್ರಕೃತಿ ಮಾತೆ ಯಾರೆಂದು ಬೇರೆ ವಿವರಣೆ ಬೇಕೇ.?!. ಖಂಡಿತಾ ಬೇಡ..
ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದು ಎಂದರೆ ಕೇವಲ ಗಿಡಮರಗಳನ್ನು ನೋಡಿ ಕಾಡು ಗುಡ್ಡಗಳನ್ನು ಮಾತ್ರ ನೋಡುವುದಲ್ಲ…🌹 ಪ್ರಕೃತಿಯಲ್ಲಿ ಅಡಗಿರುವ ಪಂಚ ತತ್ವಗಳನ್ನು, ಆಕಾಶ, ವಾಯು, ಅಗ್ನಿ, ಜಲ, ಪ್ರಥ್ವಿಗಳನ್ನು ಅರ್ಥ ಮಾಡಿಕೊಳ್ಳುವುದು ಅತೀ ಮುಖ್ಯ, ಹಾಗೇ ಈ ಐದು ಶಕ್ತಿಗಳನ್ನು ನಿಯಂತ್ರಣ ಮಾಡುವ ಘನ ಮಹಾ ಶಕ್ತಿ ಯಾರು ಎಂದೂ ತಿಳಿಯುವ ಪ್ರಯತ್ನ ಮಾಡಬೇಕು.!!. ಈಗ ಹೇಳಿ ಪರಮ ಪವಿತ್ರ ಪರಮಾತ್ಮ ಯಾರು, ಈ ಮಹಾ ಶಕ್ತಿ ಇಡೀ ಮಾನವ ಜನಾಂಗಕ್ಕೆ, ಈ ಜಗತ್ತಿಗೇ ಒಬ್ಬರೇ ಅಲ್ಲವೇ.?!..🌹
ಚಿಂತನೆಯ ವಿಚಾರ…👏

Leave a Reply

Your email address will not be published. Required fields are marked *