Prajapita Brahma Kumaris Ishwariya Vishwa Vidyalaya | Mangaluru

Posted on: December 21, 2025

ಉಚಿತ ಆಯುಷ್ ಚಿಕಿತ್ಸಾ ಶಿಬಿರ – ಬ್ರಹ್ಮಕುಮಾರೀಸ್ ಮಂಗಳೂರು

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 21, 2025ರಂದು ಆಯೋಜಿಸಲಾಗಿದ್ದ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಮಂಗಳೂರಿನ ಉರ್ವ ಸ್ಟೋರ್ಸ್ ಬ್ರಹ್ಮಕುಮಾರೀಸ್ ಕೇಂದ್ರದಲ್ಲಿ ನಡೆದ ಈ ಶಿಬಿರದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 250 ಜನ ಭಾಗವಹಿಸಿ ಆಯುಷ್ ಕಿಟ್ ಪಡೆದರು.ಆಯುರ್ವೇದ, ಹೋಮಿಯೋಪತಿ ಹಾಗೂ ಯೋಗ ಚಿಕಿತ್ಸೆಗಳ ಮೂಲಕ ಅನೇಕ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಸಲಹೆ ನೀಡಲಾಯಿತು.

ಶಿಬಿರದಲ್ಲಿ
ಡಾ. ಹೇಮಲತಾ ಪಿ., ವೈದ್ಯಾಧಿಕಾರಿ – ಸರ್ಕಾರಿ ಆಯುಷ್ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ, ಮಂಗಳೂರು,
ಡಾ. ಶ್ರೇಣಿ, ವೈದ್ಯಾಧಿಕಾರಿ – ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ, ಗುರುಪುರ,
ಡಾ. ಬಸವರಾಜ, ತಜ್ಞ ವೈದ್ಯ – ಸರ್ಕಾರಿ ಆಯುಷ್ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ, ಮಂಗಳೂರು,
ಡಾ. ಹೇಮಂತ್ ಕುಮಾರ್ ಪಿ., ತಜ್ಞ ವೈದ್ಯ,
ಡಾ. ಶ್ರೀನಿವಾಸ್ ಪಿ., ತಜ್ಞ ವೈದ್ಯ – ಸರ್ಕಾರಿ ಆಯುಷ್ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ,
ಹಾಗೂ ಶ್ರೀಮತಿ ಅನಿತಾ, ಫಾರ್ಮಸಿಸ್ಟ್ / ಹಿರಿಯ ವಿತರಕರು – ಸರ್ಕಾರಿ ಆಯುಷ್ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ
ಇವರು ಶಿಬಿರದಲ್ಲಿ ಸೇವೆ ಸಲ್ಲಿಸಿದರು.
ಬ್ರಹ್ಮಕುಮಾರಿ ವಿಶ್ವೇಶ್ವರಿ ಮಾತನಾಡಿ, ಭಾರತೀಯ ಚಿಕಿತ್ಸಾ ಪದ್ಧತಿಗಳ ಮೂಲಕ ಸಮಾಜದ ಆರೋಗ್ಯ ಸುಧಾರಣೆ ಉದ್ದೇಶದಿಂದ ಈ ರೀತಿಯ ಶಿಬಿರಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಾ ವೈದ್ಯರು, ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿ ಇವರು ಧ್ಯಾನ ಮಾಡಿಸಿದರು. ಬ್ರಹ್ಮಕುಮಾರಿ ಪ್ರಭಾ ಇವರು ಸಭಾ ಕಾರ್ಯಕ್ರಮ ನಿರ್ವಹಿಸಿದರು, ಜಯಕ್ಕ ಸ್ವಾಗತಿಸಿದರು.
ಈ ಸಮಾಚಾರಕ್ಕೆ ವ್ಯಾಪಕ ಪ್ರಚಾರ ನೀಡಬೇಕಾಗಿ ವಿನಂತಿ.
ಬಿ ಕೆ ವಿಶ್ವೇಶ್ವರಿ

Leave a Reply

Your email address will not be published. Required fields are marked *