ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತು.‌

Posted on: May 21, 2021

Watch Video

ಕೋವಿಡ್ ೧೯ ಸಂಧಿಗ್ದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಹಗಲಿರುಳು ನೀಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಹಣ್ಣುಹಂಪಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತು.‌ ಸನ್ಮಾನ್ಯ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪೌಷ್ಟಿಕ ಆಹಾರ ಕಿಟ್ ಗಳನ್ನು ಕೊಣಾಜೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ವಿತರಿಸಿ ಶುಭ ನುಡಿದರು. ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ.‌ ವಂದಾನರ್ಪಣೆ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರ ಪರವಾಗಿ ಶ್ರೀಮತಿ ಪೂರ್ಣಿಮ ಶೆಟ್ಟಿ ಮಾತಾನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು.‌ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತಾನಾಡಿ ಸ್ವಾಗತಿಸಿದರು. ‌ಮಂಗಳೂರು ವಿವಿ ಕೋವಿಡ್-೧೯ ಸೆಲ್ ಇದರ ನೋಡಲ್ ಅಧಿಕಾರಿ ಪ್ರೊ.‌ ರಾಜು ಕೃಷ್ಣ ಚಲನಾನವರ್, ಮಂಗಳೂರು ವಿವಿ ಯ ಉದ್ಯೋಗಿಗಳ ಸಹಕಾರ ಸಂಘದ ನಿರ್ದೇಶಕರೊಬ್ಬರಲ್ಲಿ ಒಬ್ಬರಾದ ಶ್ರೀ ಚನಿಯಪ್ಪ ನಾಯಕ್ ಬಿ., ಪ್ರೊ.‌ ವೈ. ಸಂಗಪ್ಪ , ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೇದಾವತಿ ಗಟ್ಟಿ, ಕೋವಿಯ್-೧೯ ಟಾಸ್ಕ್ ಫ಼ೋರ್ಸ್ ಸದಸ್ಯೆ ಶ್ರೀಮತಿ ರಾಜೇಶ್ವರಿ ಎಮ್ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.

ದಿನಾಂಕ: 21.05.2021. ಸಮಯ: 3:30 PM. ಸ್ಥಳ: ವಾತ್ಸಲ್ಯ ನಿಧಿ (ಬ್ಯಾಂಕ್ ಆಫ಼್ ಬರೋಡ /ವಿಶ್ವವಿದ್ಯಾನಿಲಯದ ಸೊಸೈಟಿ ಹತ್ತಿರ) ಈ ಕಾರ್ಯಕ್ರಮ ಆಯೋಜಿಸಲಾಯಿತು.

ಕೋವಿಡ್ ೧೯ ಸುರಕ್ಷತಾ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಲಾಯಿತು.

‌. . ‌

One thought on “ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತು.‌

Leave a Reply

Your email address will not be published. Required fields are marked *

 

 

Global Indian Families
Collaborations
LIKE US ON FACEBOOK