ಮೂಡುಬಿದಿರೆ ಕಲ್ಲಬೆಟ್ಟು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರ, ತಾಂತ್ರಿಕ, ವೈಜ್ಞಾನಿಕ ಪ್ರದರ್ಶನದ ಉದ್ಘಾಟನೆ
NV Paulose, Chairman, Global TV +91 98441 82044
ಮೂಡುಬಿದಿರೆ ತಾಲೂಕು ಕಲ್ಲಬೆಟ್ಟು ಪ್ರದೇಶದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಚಿಸಿದ ವೈವಿಧ್ಯಮಯ ಚಿತ್ರರಚನೆ, ಕೊಲಾಜ್, ತಾಂತ್ರಿಕ ಹಾಗೂ ವೈಜ್ಞಾನಿಕ ರಚನೆಗಳ ಪ್ರದರ್ಶನದ ಉದ್ಘಾಟನೆ ನೆರವೇರಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರರು “ಆರ್ಟ್ ಬೈಟ್ -2025” ಪ್ರದರ್ಶನವನ್ನು ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳ ಕೌಶಲಯುಕ್ತ ರಚನೆಗಳನ್ನು ಮೆಚ್ಚಿ ಇನ್ನಷ್ಟು ಅಭಿವೃದ್ಧಿ ಪಡಿಸಲು ಪ್ರಯತ್ನಿಸುವಂತೆ ವಿನಂತಿಸಿ ಶುಭ ಹಾರೈಸಿದರು.

ವಿದ್ಯಾರ್ಥಿಗಳು ಬಹಳ ಉತ್ತಮ ರೀತಿಯಲ್ಲಿ ಎಲ್ಲ ರೀತಿಯ ರಚನೆಗಳನ್ನು ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಗೊಳಿಸಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರದರ್ಶನವನ್ನು ವೀಕ್ಷಿಸುವ, ಅರ್ಥ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿತ್ತು.

ಶಾಲಾ ಪ್ರಾಚಾರ್ಯ ಸಂಗನ ಬಸಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಶಿಕ್ಷಕ ವಿವೇಕ್ ಪಡಿಯಾರ್, ಕಂಪ್ಯೂಟರ್ ಶಿಕ್ಷಕಿ ಆಶಾಲತಾ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಶಿಕ್ಷಕರುಗಳಾದ ಸೌಮ್ಯಶ್ರೀ, ಸರಿತಾ, ಸವಿತಾ, ಕಸ್ತೂರಿ, ವಿಶ್ವನಾಥ್ ಹಿರೇಮಠ್, ಸುಜಯ, ಹೇಮಲತಾ, ವಿನಯ, ಅಂಜಲಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರಕಲಾ ಸಂಘದ ವಿದ್ಯಾರ್ಥಿ ಪ್ರತಿನಿಧಿ ಸಾತ್ವಿಕ, ಕಂಪ್ಯೂಟರ್ ಸಂಘದ ವಿದ್ಯಾರ್ಥಿ ಪ್ರತಿನಿಧಿ ಭೂಮಿಕಾ ವಂದಿಸಿದರು.


