ಆಧುನಿಕ ಪ್ರಾಂತ್ಯದ ಶಿಲ್ಪಿ ದಿ||ಉಳ್ಳಾಲ ಶ್ರೀನಿವಾಸ್ ಮಲ್ಯರವರ 123ನೇ ಜನ್ಮ ದಿನಾಚರಣೆಯನ್ನು ಮಲ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು | Global TV

Posted on: November 21, 2024

ಮಂಗಳುರು ನಗರದ ಪದವ ಶಾಲೆ ಮುಂಭಾಗದಲ್ಲಿರುವ ಶ್ರೀನಿವಾಸ್ ಮಲ್ಯ ಉದ್ಯಾನವನದಲ್ಲಿ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನಚರಣಾ ಸಮಿತಿ ನೇತೃತ್ವದಲ್ಲಿ ಆಧುನಿಕ ಪ್ರಾಂತ್ಯದ ಶಿಲ್ಪಿ ದಿ||ಉಳ್ಳಾಲ ಶ್ರೀನಿವಾಸ್ ಮಲ್ಯರವರ 123ನೇ ಜನ್ಮ ದಿನಾಚರಣೆಯನ್ನು ಮಲ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರೀಸ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ನವೀನ್ ಲೋಬೊ , ಸಮರ್ಥ ಭಟ್,ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ , ಮಲ್ಯ ಕುಟುಂಬಸ್ಥರಾದ ಉಳ್ಳಾಲ ವಿಜಿತಾತ್ಮ ಮಲ್ಯ , ಉಳ್ಳಾಲ ಬಾಲಚಂದ್ರ ಮಲ್ಯ ,ಸಮಿತಿಯ ಅಧ್ಯಕ್ಷರಾದ ಟಿಸಿ ಗಣೇಶ್ , ಸಮಿತಿಯ ಸಂಚಾಲಕರಾದ ಶ್ರೀಮತಿ ಮಂಜುಳಾ ನಾಯಕ್ ,ಸಮಿತಿಯ ಪ್ರಧಾನ ಕಾರ್ಯದರ್ಶಿ ಅರ್ಜುನ್ ಭಂಡಾರ್ಕರ್, ಮ.ನ.ಪಾ ಸದಸ್ಯ ಕೇಶವ ಮರೋಳಿ, ಮಾಜಿ ಮ.ನ.ಪಾ ಸದಸ್ಯರಾದ ಪ್ರಕಾಶ್.ಬಿ ಸಾಲಿಯಾನ್ ,ಭಾಸ್ಕರ್ ರಾವ್ , ಪದ್ಮನಾಭ್ ಅಮೀನ್ , ಪದ್ಮನಾಭ್ ಪಣಿಕರ್ , ಮಲ್ಯ ಪ್ರತಿಮೆಯ ರೂವಾರಿ ರಮೇಶ್ ಮಾಸ್ಟರ್ ಸುಪುತ್ರಿ ಅನುರಾಧ ಶೆಟ್ಟಿ , ಸೊಸೆ ಪಲ್ಲವಿ ಶೆಟ್ಟಿ,
ನವದುರ್ಗ ದೇವಳದ ಆಡಳಿತ ಮೊಕ್ತೇಸರಾದ ವಿಶ್ವನಾಥ್ ಭಟ್, ಸಮಿತಿಯ ಸಹ ಸಂಚಾಲಕರಾದ , ನೀತು ಶರಣ್, ರಾಜೇಶ್ ದೇವಾಡಿಗ ಇಂಬ್ರಾಹಿಂ ಕೊಡಿಜಾಲ್ , ಮೊಹಮ್ಮದ್ ಕುಂಜತ್ತಬೈಲ್ ಯೋಗೀಶ್ ನಾಯಕ್, ರವಿರಾಜ್ ಪೂಜಾರಿ, ರಿತೇಶ್ ಅಂಚನ್, ಹೊನಯ್ಯ , ಎಸಿ ಜಯರಾಜ್, ದುರ್ಗಪ್ರಸಾದ್ , ಚಂದ್ರಪ್ಪ ಬಿ.ಕೆ , ಉಷಾ ಶ್ರೀಕಾಂತ್ ಶಕುಂತಳಾ ಕಾಮತ್ , ವಿದ್ಯಾ ಶೆಣೈ, ಮಮತಾ ಕುಡ್ವ, ನಿರ್ಮಲಾ ಪೈ , ನಮ್ರತಾ ಪೈ , ಆಶಾ ನಾಯಕ್ , ರಮಣಿ , ಮೋಹಿನಿ ಆರ್ ಅಮೀನ್ , ಲೈಡಿಯ ಜೂಲಿಯೆಟ್ , ಮೀನಾ ಟೆಲ್ಲಿಸ್,ಅನಿತಾ ಶಾಲೆಟ್ ಡೆಸೋಜ , ಮಲ್ಲಿಕಾ ಜರಾಜ್ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಮಿತಿಯ ಸಂಚಾಲಕರಾದ ಮಂಜುಳಾ ನಾಯಕ್ ನಿರೂಪಿಸಿದರು. ಮಾಜಿ ಮ.ನ.ಪ ಸದಸ್ಯ ಪ್ರಕಾಶ್.ಬಿ.ಸಾಲಿಯಾನ್ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *