Headline

ದಕ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ 26 ನೇ ಸಾಹಿತ್ಯ ಸಮ್ಮೇಳನ | ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ | ಮಾರ್ಚ್ 23,24

Posted on: March 19, 2024

ದಕ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ 26 ನೇ ಸಾಹಿತ್ಯ ಸಮ್ಮೇಳನ

By Raymond D’Cunha

ದಕ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳ 23,24 ಎರಡು ದಿನಗಳ ಕಾಲ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಘೋಷಣೆಯಿಂದ ನಡೆಯಲಿದೆ ಎಂದು ದಕ ಜಿಲ್ಲೆಯ ಅಧ್ಯಕ್ಷ ರಾದ ಡಾ ಎಂಪಿ ಶ್ರೀನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದಂತೆ ಹಿರಿಯ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಇಡೀ ಸಾಹಿತ್ಯದ ಸಂಭ್ರಮವು ಆಮೃತ ಸೋಮೇಶ್ವರ ನಗರದಲ್ಲಿ, ಮಿಜಾರು ಆನಂದ ಆಳ್ವ ವೇದಿಕೆ, ಕೇಶವ ಕುಡ್ಲ ಪುಸ್ತಕ ಮಳಿಗೆ,ಕೆ ಟಿ ಗಟ್ಟಿ ಮಹಾದ್ವಾರ ಮಾಡಿ ನಡೆಸಲು ಆಯೋಜನ ಸಮಿತಿ ನಿರ್ಯಿಸಲಾಗಿದೆ.

ಉದ್ಘಾಟನೆಯನ್ನು ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ ಮಾಡುವರು.
ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ದಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಮಾಡುವರು

ಸುಮಾರು ಹತ್ತು ಪುಸ್ತಕ ಮಳಿಗೆಗಳು ಬರುವ ನಿರೀಕ್ಷೆ ಇದ್ದು ,ಖಾದಿ ಹಾಗೂ ಗ್ರಾಮೋದ್ಯೋಗ, ಮಹಿಳಾ ಸಭಲೀಕರಣ ಉತ್ಪನ್ನಗಳ ಪ್ರದರ್ಶನ ಸೇರಿದಂತೆ 60 ವಿವಿಧ ‌ಮಳಿಗೆಗಳನ್ನು ನಿರೀಕ್ಷಿಸಲಾಗಿದೆ.
ಈ ಈಗಾಗಲೇ ಹತ್ತು ಪುಸ್ತಕ ಬಿಡುಗಡೆಗೆ ಪ್ರಕಾಶಕರು ಹಾಗೂ ಬರಹಗಾರರು ನೊಂದಾವಣೆ ಮಾಡಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸಲಾಗಿದೆ.

ಮಾಜಿ ಕಸಾಪ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ‌ಪುಸ್ತಕಗಳನ್ನು ಬಿಡುಗಡೆ ಮಾಡುವರು. ಅವರಿಗೆ ಜೊತೆಯಾಗಿ ಜಿಪಂ ಮುಖ್ಯಾಧಿಕಾರಿ ಆನಂದ್ ಕೆ ಹಾಗೂ ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿ ಆನಂದ ಎಲ್ ಇರುವರು.

ಈ ಬಾರಿ ಸಾಹಿತಿಗಳು, ಸಂಶೋದಕರು, ಸಂಘಟಕರು ಜೊತೆಯಲ್ಲಿ ಸಮ್ಮೇಳನದ ಮುಖಂಡತ್ವ ವಹಿಸಿಕೊಂಡಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಜೊತೆಯಲ್ಲಿ ಸೇರಿಕೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ.

ಇತರಂತೆ,ಹಿರಿಯ ಹಾಗೂ ಕಿರಿಯರ ಕವಿ ಗೋಷ್ಟಿ, ಹಿರಿಯ ಪತ್ರಕರ್ತರಿಂದಲೇ ಪತ್ರಿಕಾ ಗೋಷ್ಟಿ,ಮತ್ತು ಇತರ ವಿವಿಧ ಸಾಂಸ್ಕೃತಿಕ ಗೋಷ್ಟಿಗಳು ಆಯೋಜಿಸಲಾಗಿದೆ.

ಅಧ್ಯಕ್ಷರಾದ ಡಾ ಎಂ ಪಿ ಶ್ರೀನಾಥ್ ಕ.ಸಾ.ಪ ದ.ಕ ಜಿಲ್ಲೆ , ಡಾ. ಮಾಧವ ಎಂ .ಕೆ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ಡಾ. ಮುರಳಿ ಮೋಹನ್  ಚೂಂತಾರು ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯರು,  ವಿನಯ ಆಚಾರ್ ಗೌರವ ಕಾರ್ಯದರ್ಶಿ ದ.ಕ ಜಿಲ್ಲಾ ಕ.ಸಾ.ಪ, ಡಾ ಮಂಜುನಾಥ್ ರೇವಣ್ಕರ್  ಮಂಗಳೂರು ತಾಲೂಕು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಜಿಲ್ಲಾ ಸಮ್ಮೇಳನ ಸಮಿತಿ,  ಪುಷ್ಪರಾಜ್ ಕೆ. ಕಾರ್ಯದರ್ಶಿಗಳು ಜಿಲ್ಲಾ ಸಮ್ಮೇಳನ ಸಮಿತಿ ಮತ್ತು ಅಧ್ಯಕ್ಷರು ಮಂಗಳೂರು ನಗರ ಘಟಕ, ರೇಮಂಡ್ ಡಿಕೂನಾ ತಾಕೊಡೆ ಮುಖ್ಯಸ್ಥರು ಮಾಧ್ಯಮ ಸಮಿತಿ, ಆರ್ಥಿಕ ಸಮಿತಿಯ ಸಂಚಾಲಕರು ಚಂದ್ರಹಾಸ ಶೆಟ್ಟಿ ಇವರು  ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

Global Indian Families
Collaborations
LIKE US ON FACEBOOK